ಕರ್ನಾಟಕ ಎಂಡೊಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆ

ವೈದ್ಯಕೀಯ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು

ಮಕ್ಕಳ ಮತ್ತು ಹದಿಹರೆಯದ ಎಂಡೊಕ್ರೈನಾಲಜಿ ವಿಭಾಗ

Home

ಈ ವಿಭಾಗವು ಮಕ್ಕಳು ಮತ್ತು ಹದಿಹರೆಯದವರಲ್ಲಿ ಅಂತಃಸ್ರಾವಕ ಗ್ರಂಥಿಗಳೊಂದಿಗೆ ವ್ಯವಹರಿಸುವ ವೈದ್ಯಕೀಯ ವಿಶೇಷತೆಯಾಗಿದೆ. ಅಂತಃಸ್ರಾವಕ ಗ್ರಂಥಿಗಳು ನಮ್ಮ ದೇಹದಲ್ಲಿನ ವಿಶೇಷ ಗ್ರಂಥಿಗಳ ಗುಂಪಾಗಿದ್ದು ಅದು ವಿಶೇಷ ಹಾರ್ಮೋನ್‌ಗಳನ್ನು ಉತ್ಪತ್ತಿಸುತ್ತದೆ. ಬೆಳವಣಿಗೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವ ಇನ್ಸೂಲಿನ್ ,ಪುರುಷ ಮತ್ತು ಸ್ತ್ರೀ ಲೈಂಗಿಕ ಹಾರ್ಮೋನ್ ಗಳು ಒತ್ತಡದ ಹಾರ್ಮೋನ್ ಗಳು ಮತ್ತು ನಮ್ಮ ದೇಹದ ವಿವಿಧ ಚಟುವಟಿಕೆಗಳಿಗೆ ಸೂಕ್ತವಾದ ಶಕ್ತಿಯನ್ನು ನೀಡಿ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡಲು ಈ ಹಾರ್ಮೋನ್ ಗಳು ಅಗತ್ಯವಿದೆ.

 

ನಮ್ಮ ಸೇವೆಗಳು

ನಮ್ಮ ಸಂಸ್ಥೆಯ ತಜ್ಞರು ಮತ್ತು ಬೇರೆ ವಿಭಾಗಗಳು ಜೊತೆಗೂಡಿ ರೋಗಿಗಳಿಗೆ ಆರೈಕೆಯನ್ನು ಒದಗಿಸುತ್ತೇವೆ. ನವಜಾತ ಶಿಶುವಿನಿಂದ ಹರಿಹರೆಯದವರವರೆಗೆ ಒಂದೇ ಸೂರಿನಡಿಯಲ್ಲಿ ಚಿಕಿತ್ಸೆ ಹಾಗೂ ಆರೈಕೆ ನೀಡುವ ಉದ್ದೇಶದಿಂದ ನಮ್ಮ ಎಂಡೋಕ್ರೈನಾಲಜಿ ಸಂಸ್ಥೆಯನ್ನು ನಿರ್ಮಿಸಲಾಗಿದೆ.

 

ಬೆಳವಣಿಗೆಯ ಸಮಸ್ಯೆಗಳು: ಕಡಿಮೆ ಅಥವಾ ಅತಿ ಹೆಚ್ಚು ಎತ್ತರದ ನಿಲುವು

 

 

ಕೆಲವೊಮ್ಮೆ ವೈದ್ಯಕೀಯ ಪರಿಸ್ಥಿತಿಯ ಕಾರಣದಿಂದ ಮಕ್ಕಳು ಅವರ ಕುಟುಂಬ ಅಥವಾ ಸಾಮಾನ್ಯ ಜನತೆಗೆ ಹೋಲಿಸುವಾಗ ಕಡಿಮೆ ಎತ್ತರದಲ್ಲಿ ಇರುತ್ತಾರೆ. ಈ ಬಗ್ಗೆ ಕೂಡಲೇ ತನಿಖೆ ನಡೆಸಿ ಚಿಕಿತ್ಸೆ ನೀಡಬೇಕು. ಇಂತಹ ಪರಿಸ್ಥಿತಿಯಲ್ಲಿ ಎತ್ತರವನ್ನು ಸುಧಾರಿಸಲು ಬೆಳವಣಿಗೆಯ ಹಾರ್ಮೋನ್ ಚಿಕಿತ್ಸೆಯೊಂದಿಗೆ ಚಿಕಿತ್ಸೆ ನೀಡಬಹುದು.

 

 

 

 

ಪ್ರೌಢಾವಸ್ಥೆಯ ಸಮಸ್ಯೆಗಳು: ಆರಂಭಿಕ ಮತ್ತು ತಡವಾದ ಪ್ರೌಢಾವಸ್ಥೆ:

 

ಹುಡುಗಿಯರಲ್ಲಿ ಎಂಟು ವರ್ಷಕ್ಕಿಂತ ಮೊದಲು ಮತ್ತು ಹುಡುಗರಲ್ಲಿ ಒಂಬತ್ತು ವರ್ಷಕ್ಕಿಂತ ಮೊದಲು ಪ್ರೌಢಾವಸ್ಥೆಯ ಬದಲಾವಣೆಗಳನ್ನು ಕಂಡರೆ ಇದು ಅಸಹಜತೆಯನ್ನು ಸೂಚಿಸುತ್ತದೆ. ಈ ಮಕ್ಕಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಹಾಯ ಮಾಡಲು ಹೆಚ್ಚಿನ ತನಿಖೆ ಮತ್ತು ಹಾರ್ಮೋನ್ ಚಿಕಿತ್ಸೆಯ ಅಗತ್ಯವಿರುತ್ತದೆ. ಅದೇ ರೀತಿ ಕೆಲವೊಮ್ಮೆ ಮಕ್ಕಳಿಗೆ ಪ್ರೌಢಾವಸ್ಥೆಯ ಆರಂಭ ವಿಳಂಬವಾಗಬಹುದು ಅಂದರೆ ಹುಡುಗಿಯರಲ್ಲಿ 13 ವರ್ಷ ಮತ್ತು ಹುಡುಗರಲ್ಲಿ 14 ವರ್ಷವಾದರೂ ಪ್ರೌಢಾವಸ್ಥೆಯ ಬದಲಾವಣೆಗಳು ಇನ್ನು ಬಂದಿರುವುದಿಲ್ಲ. ಇದನ್ನು ಪ್ರಚೋದಿಸಲು ಅವರಿಗೆ ವೈದ್ಯಕೀಯ ಪರಿಶೀಲನೆ ಬೇಕಾಗುತ್ತದೆ ಮತ್ತು ಹಾರ್ಮೋನ್ ಚಿಕಿತ್ಸೆಯ ಅಗತ್ಯವಿರುತ್ತದೆ.

  

 

 

ಥೈರಾಯಿಡ್ ಅಸ್ವಸ್ಥತೆಗಳು:

ನವಜಾತ ಶಿಶುವಿನಿಂದ ಹಿಡಿದು ಹದಿಹರೆಯದವರವರೆಗೆ ಎಲ್ಲಾ ವಯೋಮಾನದವರಲ್ಲಿ ಥೈರಾಯಿಡ್ ಸಮಸ್ಯೆ ಸಾಮಾನ್ಯವಾಗಿದೆ. ಅದು ನಿಷ್ಕ್ರಿಯ ಅಥವಾ ಅತಿಯಾಗಿ ಕಾರ್ಯನಿರ್ವಹಿಸುವ ಗ್ರಂಥಿಯ ಸಮಸ್ಯೆಯಾಗಿರಬಹುದು. ಉತ್ತಮವಾಗಿ ಕಾರ್ಯನಿರ್ವಹಿಸುವ ಥೈರಾಯಿಡ್ ಗ್ರಂಥಿಯು ಬಾಲ್ಯದಿಂದಲೇ ಬಹಳ ಮುಖ್ಯವಾಗಿರುತ್ತದೆ, ಏಕೆಂದರೆ ಯಾವುದೇ ಅಸಹಜತೆಯು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು.

 

 

 

 

ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅಸ್ವಸ್ಥತೆಗಳು:

ನಮ್ಮ ಜನರಲ್ಲಿ ವಿಟಮಿನ್ ಡಿ ಕೊರತೆ ಸಾಮಾನ್ಯವಾಗಿವೆ ಅದರಲ್ಲೂ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತದೆ. ಇದು ಮಕ್ಕಳಲ್ಲಿ ಬಹು ಮುಖ್ಯವಾದ ವಿಟಮಿನ್ ಆಗಿದೆ ಏಕೆಂದರೆ ವಿಟಮಿನ್ ಡಿ ನಮ್ಮ ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಪವಾದ ನೋವು ಅಥವಾ ತೀವ್ರವಾದ ಮೂಳೆ ವಿಕಾರ ಇವೆಲ್ಲ ಸಮಸ್ಯೆಯೂ ಕಾಣಬಹುದು. ಕೆಲವೊಮ್ಮೆ ಸುಸ್ತು, ಮಾಂಸಖಂಡ, ಸೆಳೆತ ಮತ್ತು ತಲೆನೋವುಗಳಂತಹ ಅನೇಕ ನಿರ್ದಿಷ್ಟವಲ್ಲದ ಲಕ್ಷಣಗಳನ್ನು ಕೂಡ ಉಂಟುಮಾಡುತ್ತದೆ.

 

 

 

ಇತರ ಅಂತಃಸ್ರಾವಕ ಪರೀಕ್ಷೆ:

 

ನಮ್ಮ ದೇಹದಲ್ಲಿನ ಪ್ರಮುಖ ಅಂತಃಸ್ರಾವಕ ಗ್ರಂಥಿಗಳಾದ ಪಿಟ್ಯುಟರಿ, ಮೂತ್ರಜನಕಾಂಗ ಅಂಡಾಶಯಗಳು ಮತ್ತು ವೃಷಣಗಳ ಪರಿಶೀಲನೆಯನ್ನು ಮಾಡಲಾಗುವುದು. ಈ ಅಂತಃಸ್ರಾವಕ ಅಸ್ವಸ್ಥತೆಯನ್ನು ಪತ್ತೆಹಚ್ಚಲು ಮಕ್ಕಳಿಗೆ ಹಾರ್ಮೋನ್ ಗಳನ್ನು ನೀಡಿ ಗ್ರಂಥಿಗಳ ಪ್ರತಿಕ್ರಿಯೆಯನ್ನು ರಕ್ತ ಪರೀಕ್ಷೆಯ ಮೂಲಕ ಅಂತಃಸ್ರಾವಕದ ಸ್ಥಿತಿಯನ್ನು ಪರಿಶೀಲಿಸಲಾಗುವುದು.

 

 

 

ಗ್ಲೂಕೋಸ್ ಅಸ್ವಸ್ಥತೆಗಳು:

ಮಕ್ಕಳಲ್ಲಿ ಇದು ಸಾಮಾನ್ಯ ಅಂತಃಸ್ರಾವಕ ಸಮಸ್ಯೆಯಾಗಿದೆ. ಇದು ಅಧಿಕ ಮತ್ತು ಕಡಿಮೆ ರಕ್ತದ ಸಕ್ಕರೆ ಆಗಿರಬಹುದು, ಇವೆರಡು ಮಕ್ಕಳಿಗೆ ಅಪಾಯಕಾರಿ. ಅಧಿಕ ರಕ್ತದ ಸಕ್ಕರೆಯೂ ಮಧುಮೇಹವನ್ನು ಸೂಚಿಸುತ್ತದೆ. ಇದು ಟೈಪ್- 1, ಟೈಪ್ -2, ನೀಯೋ ನೇಟಲ್ (ನವಜಾತ ಶಿಶುಗಳಲ್ಲಿ) ಮತ್ತು ಮೋಡಿ ಮುಂತಾದ ವಿವಿಧ ಪ್ರಕಾರಗಳಲ್ಲಿರಬಹುದು. ರಕ್ತದಲ್ಲಿ ಕಡಿಮೆ ಮಟ್ಟದ ಸಕ್ಕರೆಯೂ ಕೂಡ ಗಂಭೀರವಾದ ಸಮಸ್ಯೆಯನ್ನು ಸೂಚಿಸಬಹುದು ಅದನ್ನು ಗುರುತಿಸದಿದ್ದರೆ ಮೆದುಳಿಗೆ ಮತ್ತು ಜೀವಕ್ಕೆ ಅಪಾಯಕಾರಿ.

ನಾವು ನಿರಂತರ ಗ್ಲೂಕೋಸ್ ಮಾನಿಟರಿಂಗ್ ಸೆನ್ಸರ್ಸ್ ಗಳು ಮತ್ತು ಇನ್ಸುಲಿನ್ ಪಂಪ್ ಸಾಧನಗಳ ಬಳಕೆಗೆ ಬೆಂಬಲವನ್ನು ಒದಗಿಸಲು ಕ್ಲಿನಿಕಲ್ ಮತ್ತು ತಾಂತ್ರಿಕ ಪರಿಣತಿಯನ್ನು ಹೊಂದಿದ್ದೇವೆ. ಪ್ರಸ್ತುತ ನಾವು 1100 ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಬೆಂಬಲಿಸುವ ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ.

 

 

 

 

ಬಾಲ್ಯದ ಬೊಜ್ಜು (ಸ್ಥೂಲಕಾಯತೆ):

 

ಮಕ್ಕಳ ಸ್ಥೂಲಕಾಯತೆಯು ಭಾರತದಲ್ಲಿಯೂ ಕಂಡುಬಂದಿದೆ ವಿಶೇಷವಾಗಿ ನಮ್ಮ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತದೆ. ಇದು ನಮ್ಮ ಅನಿಯಮಿತ ಜೀವನಶೈಲಿ ಅಥವಾ ಕೆಲವು ವೈದ್ಯಕೀಯ ಪರಿಸ್ಥಿತಿಯ ಕಾರಣದಿಂದ ಉಂಟಾಗಬಹುದು. ಇದರಲ್ಲಿ ಯಾವುದೇ ಕಾರಣವಿದ್ದರೂ ಅದನ್ನು ಕೂಡಲೇ ಪರಿಶೀಲಿಸಿ ಮಧುಮೇಹ ,ಪಿತ್ತ ಜನಕಾಂಗದ ವೈಫಲ್ಯ ಅಥವಾ ಅಧಿಕ ಕೊಲೆಸ್ಟ್ರಾಲ್ ನಂತಹ ಗಂಭೀರ ತೊಡಕುಗಳನ್ನು ತಪ್ಪಿಸಲು ಪ್ರಯತ್ನಿಸಬೇಕು

  

 

 

ಪಿಟ್ಯುಟರಿ ಸಮಸ್ಯೆಗಳು:

 

ಪಿಟ್ಯುಟರಿ ಗ್ರಂಥಿಯು ನಮ್ಮ ಮೆದುಳಿನಲ್ಲಿರುವ ಒಂದು ಸಣ್ಣ ಗ್ರಂಥಿಯಾಗಿದೆ. ಎಲ್ಲಾ ಇತರ ಅಂತಃಸ್ರಾವಕ ಗ್ರಂಥಿಗಳನ್ನು ನಿಯಂತ್ರಿಸುವುದರಿಂದ ಇದನ್ನು “ಮಾಸ್ಟರ್ ಗ್ರಂಥಿ” ಎಂದು ಕರೆಯಲಾಗುತ್ತದೆ. ಇದು ಇತರ ಅಂತಃಸ್ರಾವಕ ಗ್ರಂಥಿಗಳೊಂದಿಗೆ ಸಂವಹನ ನಡೆಸಿ ವಿವಿಧ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ. ಮೆದುಳಿನ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ, ತಲೆಗೆ ಗಾಯ ಅಥವಾ ಹುಟ್ಟಿನಿಂದಲೇ ಬೆಳವಣಿಗೆ ಇಲ್ಲದಿರುವ ಗ್ರಂಥಿ ಮುಂತಾದ ಕೆಲವು ಪರಿಸ್ಥಿತಿಗಳು ಈ ಗ್ರಂಥಿಯ ಮೇಲೆ ಪರಿಣಾಮ ಬೀರಬಹುದು. ಅವು ಕಡಿಮೆ ಎತ್ತರ, ತಡವಾದ ಪ್ರೌಢಾವಸ್ಥೆ, ಥೈರಾಯಿಡ್ ಸಮಸ್ಯೆಗಳು ಮತ್ತು ಶಕ್ತಿಯ ಕೊರತೆಯಂತಹ ಹಲವಾರು ರೀತಿಯಲ್ಲಿ ಪ್ರಕಟವಾಗಬಹುದು.

 

 

ಇತರ ಕಾರಣದಿಂದ ಅಂತಃಸ್ರಾವಕ ಸಮಸ್ಯೆಗಳು:

ಕ್ಯಾನ್ಸರ್ ನಿಂದ ಬದುಕುಳಿದವರು ಮತ್ತು ಮೆದುಳಿನ ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಅಥವಾ ವಿಕಿರಣ ಚಿಕಿತ್ಸೆಗೆ ಒಳಗಾದ ಮಕ್ಕಳು ಅಂತಃಸ್ರಾವಕ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಅವರಿಗೆ ಅಂತಃಸ್ರಾವಕ ಗ್ರಂಥಿಯ ಕಾರ್ಯಗಳ ಸಕ್ರಿಯ ಮೇಲ್ವಿಚಾರಣೆ ಅಗತ್ಯವಿರುತ್ತದೆ.

 

ಲೈಂಗಿಕ ವ್ಯತ್ಯಾಸದ ಅಸ್ವಸ್ಥತೆ (ಡಿ.ಎಸ್. ಡಿ)- ಲೈಂಗಿಕ ಅಸ್ಪಷ್ಟತೆ:

 

ಅಪರೂಪವಾಗಿ ಶಿಶುಗಳು ಅನಿಶ್ಟಿತ ಜನನಾಂಗದ ಗುರುತನ್ನು ಹೊಂದಿದ್ದು, ವಿಲಕ್ಷಣವಾಗಿ ಕಾಣುವ ಬಾಹ್ಯ ಜನನಾಂಗಗಳೊಂದಿಗೆ, ಹುಡುಗಿ ಅಥವಾ ಹುಡುಗನಾಗಿ ಕಾಣಿಸಿಕೊಳ್ಳುವುದಿಲ್ಲ. ಇದು ಗಂಭೀರವಾದ ಆಧಾರವಾಗಿರುವ ಅಂತಃಸ್ರಾವಕ ಹಾರ್ಮೋನ್ ಅಸಮತೋಲನವನ್ನು ಸೂಚಿಸುತ್ತದೆ ಮತ್ತು ಸಂಪೂರ್ಣ ಅಂತಃಸ್ರಾವಕ ಪರಿಶೀಲನೆ ಬೇಕಾಗುತ್ತದೆ.

 

 

ಮೂತ್ರಜನಕಾಂಗದ ಗ್ರಂಥಿಗಳ ಅಸ್ವಸ್ಥತೆಗಳು:

 

ಅಡ್ರಿನಲ್ ಗ್ರಂಥಿಯು ಕಾರ್ಟಿಸೋಲ್ ಅಥವಾ ಒತ್ತಡದ ಹಾರ್ಮೋನ್ ಎಂಬ ಪ್ರಮುಖ ಹಾರ್ಮೊನ್ ಗಳನ್ನು ಸ್ರವಿಸುತ್ತದೆ. ಇದರ ಕೊರತೆಯು ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಶಕ್ತಿಯ ಕೊರತೆ, ದಣಿವು, ಚರ್ಮದ ಕಪ್ಪಾಗುವಿಕೆ ಮತ್ತು ಅನಾರೋಗ್ಯದಿಂದ ನಿಧಾನವಾಗಿ ಚೇತರಿಸಿಕೊಳ್ಳವುದು ಇವೆಲ್ಲವು ಅದರ ಲಕ್ಷಣವಾಗಿರಬಹುದು.

 

 

 

 

ಹದಿಹರೆಯದ ಪರಿವರ್ತನೆ ಕ್ಲಿನಿಕ್:

 

ಹದಿಹರೆಯದವರ ಮಾನಸಿಕ ಪ್ರಬುದ್ಧತೆಯ ಪ್ರಕಾರ ಮಕ್ಕಳಿಂದ ವಯಸ್ಕರ ಅಂತಃಸ್ರಾವಕ ಸೇವೆಯ ಕಡೆಗೆ ಸುಗಮವಾಗಿ ಮತ್ತು ಚಿಂತೆ ಇಲ್ಲದೆ ಪರಿವರ್ತನೆಯನ್ನು ಒದಗಿಸುವುದು.

 

 

 

 

×
ABOUT DULT ORGANISATIONAL STRUCTURE PROJECTS