ಕರ್ನಾಟಕ ಎಂಡೊಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆ

ವೈದ್ಯಕೀಯ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು

ಮಕ್ಕಳ & ಹದಿಹರೆಯದ ಪೌಷ್ಠಿಕಾಂಶ ವಿಭಾಗ

Home

 

ಆಹಾರವು ಮಗುವಿನ ಯೋಗಕ್ಷೇಮದ ಮೇಲೆ ಭಾರಿ ಪರಿಣಾಮ ಬೀರುತ್ತದೆ ಮತ್ತು ಟೈಪ್-1 ಮಧುಮೇಹವಿರುವ ಮಕ್ಕಳಿನ ಆಹಾರ ಕ್ರಮ ಇನ್ನೂ ಹೆಚ್ಚು ಪ್ರಾಮುಖ್ಯವಾಗಿರುತ್ತದೆ. ಜೀವನ ಪರ್ಯಂತ ಜೀವ ಉಳಿಸುವ ಇನ್ಸುಲಿನ್ನಲ್ಲಿ ಇರುವ ಮಗುವಿನ ಆರೋಗ್ಯ ಮತ್ತು ಉತ್ತಮ ರೀತಿಯ ಜೀವನಶೈಲಿಯನ್ನು ಖಚಿತಪಡಿಸಿಕೊಳ್ಳಲು, ಕರ್ನಾಟಕ ಎಂಡೋಕ್ರೈನೋಲಜಿ ಮತ್ತು ಸಂಶೋಧನಾ ಸಂಸ್ಥೆಯ ಮಧುಮೇಹ ಶಿಕ್ಷಣ ತಜ್ಞರ ಹಾಗೂ ಆಹಾರ ತಜ್ಞರ ತಂಡವು ಪೌಷ್ಟಿಕ ಆಹಾರದ ಶಿಕ್ಷಣವನ್ನು ಒದಗಿಸುವಲ್ಲಿ ಅಡಿಪಾಯ ಹಾಕುತ್ತದೆ.

 

ನಮ್ಮ ಸೇವೆಗಳು:

  1. ನಮ್ಮಲ್ಲಿ ಪೌಷ್ಟಿಕಾಂಶ ಸಂಬಂಧಿತ ಇತಿಹಾಸ, ಜೀವ ರಾಸಾಯನಿಕ ಮಾಹಿತಿ, ಆಂಥ್ರೊಪೊಮೆಟ್ರಿಕ್ ಅಳತೆ, ಪೋಷಣೆಗೆ ಸಂಬಂಧಿಸಿದ ದೈಹಿಕ ಲಕ್ಷಣಗಳು ಇವೆಲ್ಲರ ಮಾಹಿತಿ ಪಡೆದು ಯಾವುದಾದರು ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಿ ವ್ಯಾಖ್ಯಾನಿಸಲಾಗುತ್ತದೆ. ಇದೆಲ್ಲದನ್ನು ಪರಿಗಣಿಸಿ ಆಹಾರದ ಕ್ರಮ, ರೀತಿ ಅಥವಾ ಯೋಜನೆಯನ್ನು ಸೂಚಿಸಲಾಗುತ್ತದೆ.

  2. ಮೆಡಿಕಲ್ ನ್ಯೂಟ್ರಿಷನ್ ಥೆರಪಿ (ಎಂ. ಎನ್‌. ಟಿ) ಮೂಲಕ ವೈಯಕ್ತಿಕ ಪೋಷಣಕ್ಕೆ ಅನುಸಾರವಾಗಿ ಪ್ರತಿಯೊಂದು ಮಗುವಿಗೂ ಅವರ ವಯಸ್ಸು, ಲಿಂಗದ ಪ್ರಕಾರ, ಆಹಾರದ ಪದ್ದತಿಯನ್ನು ಸೂಚಿಸಿ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ತಲುಪಲು ಸಹಾಯ ಮಾಡುವುದು.

  3. ಪ್ರತಿಯೊಂದು ಮಗುವಿಗೂ ಪ್ರತ್ಯೇಕವಾದ ಗಮನ ನೀಡಿ ಅವರ ಜನಾಂಗೀಯತೆ, ಆಹಾರ ಪದ್ಧತಿ, ಸ್ಥಳದಲ್ಲಿ ಲಭ್ಯವಿರುವ ಆಹಾರ ಉತ್ಪನ್ನಗಳು ಮತ್ತು ಆಹಾರ ಆದ್ಯತೆ ಪ್ರಕಾರ ಶಿಶು, ಮಕ್ಕಳು ಮತ್ತು ಹದಿಹರೆಯದವರಿಗೆ ಆಹಾರ ಕ್ರಮ ಯೋಜನೆ ಹಾಗೂ ಸೇವಿಸುವ ರೀತಿಯನ್ನು ತಿಳಿಸಿ ಸಹಾಯ ಮಾಡುವುದು.

  4. ಊಟದ ಕಾರ್ಬೋಹೈಡ್ರೇಟ್ ಎಣಿಕೆಯನ್ನು ಕಲಿಸಿ ಸಾಮಾನ್ಯವಾಗಿ ಸೇವಿಸುವ ಆಹಾರದಲ್ಲಿಯೇ ನಮ್ಯತೆಯನ್ನು ತರುವುದು ಹಾಗೂ ಚಿಕಿತ್ಸಾ ಯೋಜನೆಗೆ ಅನುಸರಿಸುವಂತೆ ಮಾಡುವುದು.

  5. ಮಧುಮೇಹ ಸ್ವಯಂ ನಿರ್ವಾಹಣೆ ಶಿಕ್ಷಣ ಮತ್ತು ಬೆಂಬಲದಿಂದ ಸಹಾಯ ಮಾಡುವುದು. ಇದರಲ್ಲಿ ಇನ್ಸುಲಿನ್ ನೀಡುವ ವಿಧಾನ, ಗ್ಲುಕೋಮೀಟರ್ ಉಪಯೋಗಿಸುವ ವಿಧಾನ, ರಕ್ತದ ಗ್ಲೂಕೋಸ್ ಮಟ್ಟ ಸ್ವತಃ ಪರೀಕ್ಷೆ ಮಾಡುವುದು, ರಕ್ತದ ಗ್ಲುಕೋಸ್ ಹೆಚ್ಚು ಅಥವಾ ಕಮ್ಮಿ ಆದಲ್ಲಿ ಅದನ್ನು ನಿಭಾಯಿಸುವುದು ಇವೆಲ್ಲವೂ ತಿಳಿಸಿಕೊಡಲಾಗುವುದು.

  6. ದೇಹದ ತೂಕ ಅಥವಾ ಹೆಚ್ಚಿನ ಬೊಜ್ಜು ಇರುವ ಮಕ್ಕಳಿಗೆ ಪೌಷ್ಟಿಕ ಆಹಾರ ದೈಹಿಕ ಚಟುವಟಿಕೆ ಮತ್ತು ಸುಲಭ ಸಮರ್ಥನೀಯ ಅಭ್ಯಾಸಗಳ ಪ್ರಾಮುಖ್ಯತೆಯನ್ನು ತಿಳಿಸಿ ಬೊಜ್ಜನ್ನು(ಸ್ಥೂಲಕಾಯತೆ) ನಿಯಂತ್ರಿಸುವ ಸಮಾಲೋಚನೆ ನೀಡಲಾಗುವುದು.

  7. ಶಾಲಾ ಸಮಯದಲ್ಲಿ ಮಧುಮೇಹ ಉಳ್ಳ ಮಕ್ಕಳಿಗೆ ಸಹಕರಿಸಲು ಮತ್ತು ಅದಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಪತ್ರ ಹಾಗೂ ಸಲಹಾ ಪಟ್ಟಿಯನ್ನು ಶಾಲಾ ಕಾಲೇಜುಗಳಿಗೆ ನೀಡಿ ಬೆಂಬಲಿಸುವುದು.

  8. ರೋಗ ನಿರ್ಣಯದ ಆರಂಭದಿಂದ ಪ್ರತಿಯೊಂದು ಹಂತದಲ್ಲಿಯೂ ಕೂಡ ಮಗು ಹಾಗೂ ಕುಟುಂಬದವರಿಗೆ ಮಾನಸಿಕ ಬೆಂಬಲ ನೀಡುವುದು.

  9. ಮಗುವಿಗೆ ನಿಗದಿಪಡಿಸಿದ ಆಹಾರದ ಗುರಿ ಮತ್ತು ಯೋಜನೆಗಳನ್ನು ಆಗಾಗ ಪರಿಶೀಲಿಸಿ ಪ್ರಗತಿಯ ಆಧಾರದ ಮೇಲೆ ಬೇಕಾಗಿರುವ ಕ್ರಮವನ್ನು ಅದಕ್ಕೆ ತಕ್ಕಂತೆ ಬದಲಾಯಿಸಿ ಬಯಸಿದ ಫಲಿತಾಂಶವನ್ನು ತಲುಪಲು ಸಹಾಯ ಮಾಡುವುದು.

ಆಹಾರ ಮತ್ತು ಜೀವನಶೈಲಿಯ ಆಯ್ಕೆಗಳು ಒಟ್ಟಾರೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥ ಮಾಡಿಸುತ್ತೇವೆ. ಮೆಡಿಕಲ್ ನ್ಯೂಟ್ರಿಷನ್ ಥೆರಪಿ (ಎಂ.ಎನ್‌.ಟಿ), ಪ್ರೇರಕ ಸಂದರ್ಶನ ಮತ್ತು ನಿರ್ದಿಷ್ಟ ಗುರಿಯನ್ನಿಟ್ಟರೆ ಇದನ್ನು ಸುಲಭ ರೀತಿಯಲ್ಲಿ ಪೂರೈಸಲು ಸಹಾಯ ಮಾಡುತ್ತದೆ ಎಂದು ಖಚಿತಪಡಿಸುತ್ತೇವೆ. ನಮ್ಮ ತಂಡವು ಪ್ರತಿ ವರ್ಷ ವಿಶ್ವ ಮಧುಮೇಹ ದಿನವನ್ನು ಆಚರಿಸುತ್ತದೆ, ಹಾಗೂ ನಮ್ಮ ತಂಡದಿಂದ ವಿವಿಧ ಆರೋಗ್ಯ ಶಿಬಿರಗಳನ್ನು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ಆಯೋಜಿಸುತ್ತೇವೆ ಹಾಗೂ ಮಕ್ಕಳು ಭಾಗವಹಿಸುತ್ತಾರೆ. ನಮ್ಮ ಸಂಸ್ಥೆಯ ಆಹಾರ ತಜ್ಞರು ಹಾಗೂ ಮಕ್ಕಳ ಎಂಡೋಕ್ರೈನೋಲಿಸ್ಟ್ ತಂಡವು ಮಗು ಮತ್ತು ಅವರ ಕುಟುಂಬದೊಂದಿಗೆ ಒಟ್ಟುಗೂಡಿ ಸಂಪೂರ್ಣ ಪೌಷ್ಟಿಕಾಂಶದ ಆರೈಕೆ ಮತ್ತು ಬೆಂಬಲವನ್ನು ನೀಡಿ ಸಹಾಯ ಮಾಡಲು ಮುಂದಾಗುತ್ತಾರೆ.

 

 

×
ABOUT DULT ORGANISATIONAL STRUCTURE PROJECTS