ಕರ್ನಾಟಕ ಎಂಡೊಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆ

ವೈದ್ಯಕೀಯ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು

ಆಹಾರ ಮತ್ತು ಪೌಷ್ಟಿಕಾಂಶ ವಿಭಾಗ

Home

ಆಹಾರ ಮತ್ತು ಪೌಷ್ಟಿಕಾಂಶ

ಆಹಾರ ಮತ್ತು ಪೌಷ್ಟಿಕಾಂಶ ವಿಭಾಗದ ಆಹಾರ ತಜ್ಞರು ಆಹಾರ ಮತ್ತು ಪೋಷಣೆ ಸ್ನಾತಕೋತರ ಪದವಿಯನ್ನು ಪಡೆದಿದ್ದಾರೆ ಹಾಗೂ ಮಧುಮೇಹ ಶಿಕ್ಷಣದ ತರಬೇತಿಯನ್ನು ಪಡೆದಿದ್ದಾರೆ. ಇವರು ರೋಗ ನಿರ್ದಿಷ್ಟ ಪೌಷ್ಟಿಕಾಂಶ ಚಿಕಿತ್ಸೆಯಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಅತ್ಯುತ್ತಮವಾದ ಪೋಷಣೆ, ಆಹಾರದ ರೀತಿ ಮತ್ತು ಪ್ರಮಾಣ, ಅನೇಕ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ ಹಾಗೂ ಉತ್ತಮ ಆರೋಗ್ಯಕ್ಕೆ ಅಡಿಪಾಯ ನೀಡುತ್ತದೆ ಎಂದು ನಂಬಿದ್ದೇವೆ. ಇದನ್ನು ಸಾಧಿಸಲು ನಮ್ಮ ವಿಭಾಗವು ಆಹಾರ, ವ್ಯಾಯಾಮ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೂಲಕ ಸಮಗ್ರ ಯೋಜನೆಯನ್ನು ನೀಡಿ ಸಹಕರಿಸುತ್ತದೆ.

 

ನಮ್ಮ ಗುರಿ

  1. ಅತ್ಯುನ್ನತ ಗುಣಮಟ್ಟದ ಪೌಷ್ಟಿಕಾಂಶದ ಆರೈಕೆಯನ್ನು ಒದಗಿಸುವುದು.
  2. ಪೌಷ್ಟಿಕಾಂಶದ ಕೊರತೆಯನ್ನು ತಡೆಗಟ್ಟಲು ಸಮತೋಲಿತ ಆಹಾರವನ್ನು ಶಿಫಾರಸು ಮಾಡುವುದು.
  3. ಮಧುಮೇಹವಿರುವವರಿಗೆ ಪ್ರಾದೇಶಿಕ ಹಾಗೂ ಜನಾಂಗೀಯತೆಯ ಪ್ರಕಾರ ಸುಲಭ ಸಮರ್ಥನೆಯ ಆಹಾರದ ಪದ್ಧತಿಯ ಆಯ್ಕೆಯನ್ನು ಮಾಡಲು ಶಿಕ್ಷಣ ನೀಡುವುದು.
  4. ಊಟದ ಕಾರ್ಬೋಹೈಡ್ರೇಟ್ ಎಣಿಕೆಯನ್ನು ಕಲಿಸಿ ಅದಕ್ಕೆ ತಕ್ಕಂತೆ ಇನ್ಸುಲಿನ್ ಲೆಕ್ಕವನ್ನು ಮಧುಮೇಹವಿರುವ ಮಕ್ಕಳಿಗೆ ಮತ್ತು ಅವರ ತಂದೆ ತಾಯಿಯವರಿಗೆ ಹೇಳಿಕೊಡುವುದು.
  5. ಮಧುಮೇಹ ನಿರ್ವಹಣೆಯ ಆಧಾರ ಸ್ತಂಭವಾದ- ಆಹಾರ, ವ್ಯಾಯಾಮ, ಔಷಧಿ ಮತ್ತು ಒತ್ತಡ ನಿಯಂತ್ರಣ ಇದರ ಅನುಸರಣೆಯ ಮೂಲಕ ಮಧುಮೇಹದಿಂದ ಉಂಟಾಗುವ ತೊಂದರೆಗಳನ್ನು ವಿಳಂಬಿಸಲು ಪ್ರೋತ್ಸಾಹಿಸುವುದು.
  6. ಇನ್ಸುಲಿನ್ ಚಿಕಿತ್ಸೆಯಲ್ಲಿ ಇರುವವರಿಗೆ ಮಧುಮೇಹ ಸ್ವಯಂ ನಿರ್ವಾಹಣ ಶಿಕ್ಷಣ ಮತ್ತು ಬೆಂಬಲದಿಂದ ಸಹಾಯ ಮಾಡುವುದು. ಇದರಲ್ಲಿ ಇನ್ಸುಲಿನ್ ನೀಡುವ ವಿಧಾನ ರಕ್ತದ ಗ್ಲುಕೋಸ್ ಮಟ್ಟ ಸ್ವತಃ ಪರೀಕ್ಷೆ ಮಾಡುವುದು ಹಾಗೆಯೇ ರಕ್ತದ ಗ್ಲುಕೋಸ್ ಹೆಚ್ಚು ಕಮ್ಮಿ ಆದಲ್ಲಿ ಅದನ್ನು ನಿಭಾಯಿಸುವುದು ಇವೆಲ್ಲವನ್ನು ತಿಳಿಸಿಕೊಡಲಾಗುವುದು.
  7. ಮೆಡಿಕಲ್ ನ್ಯೂಟ್ರಿಷನ್ ಥೆರಪಿಯ ಮೂಲಕ ಚಿಕಿತ್ಸಾ ಯೋಜನೆಗೆ ಅನುಸರಿಸಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಲು ಸಹಾಯ ಮಾಡುವುದು.
  8. ಮೂತ್ರಪಿಂಡದ ಅಸ್ವಸ್ಥತೆ, ಕ್ಯಾನ್ಸರ್, ಹೃದಯನಾಳದ ತೊಂದರೆ, ಸ್ಥೂಲಕಾಯತೆ, ಪಿ.ಸಿ.ಓ.ಡಿ ಹಾಗೆ ಇತರ ವೈದ್ಯಕೀಯ ತೊಂದರೆ ಇದ್ದಲ್ಲಿ ಪ್ರತ್ಯೇಕ ವ್ಯಕ್ತಿಯ ಪೋಷಣೆಗೆ ಅನುಸಾರವಾಗಿ ಆಹಾರದ ಯೋಜನೆಯನ್ನು ಸೂಚಿಸುವುದು.

 

ಆರೈಕೆ ಪ್ರಕ್ರಿಯೆ:

ಪೌಷ್ಟಿಕಾಂಶ ತಪಾಸಣೆ ಮಧ್ಯಸ್ಥಿಕೆ ಮತ್ತು ಶಿಕ್ಷಣದ ಮೂಲಕ ಬಹು ಶಿಸ್ತಿನ ವಿಧಾನವನ್ನು ಒದಗಿಸುವ ಗುರಿಯನ್ನು ನಮ್ಮ ಆಹಾರ ತಜ್ಞರು ಹೊಂದಿದ್ದಾರೆ. ವಯಸ್ಸು, ಲಿಂಗ, ಎತ್ತರ, ತೂಕ, ವ್ಯಾಯಾಮ, ಸಾಮಾಜಿಕ ಆರ್ಥಿಕ ಸ್ಥಿತಿ, ಆಹಾರದ ಇತಿಹಾಸ, ಸ್ಥಳದಲ್ಲಿ ಲಭ್ಯವಿರುವ ಆಹಾರ ಉತ್ಪನ್ನಗಳು, ವೈಯಕ್ತಿಕ ಆದ್ಯತೆ ಹಾಗೂ ಇತರ ವೈದ್ಯಕೀಯ ತೊಂದರೆಯ ಆಧಾರದ ಮೇಲೆ ಆಹಾರದ ಯೋಜನೆಯನ್ನು ಯೋಜಿಸಲಾಗುವುದು. ನಮ್ಮ ಆಹಾರ ತಜ್ಞರು ಟೈಪ್ 1 ಮಧುಮೇಹವಿರುವ   ಮಕ್ಕಳ ಮಧುಮೇಹ ಶಿಕ್ಷಣದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಮಧುಮೇಹದ ನಿರ್ವಹಣೆ, ವಯಸ್ಸಿಗೆ ಸೂಕ್ತವಾದ ಆರೈಕೆ, ಆಹಾರದ ಯೋಜನೆ, ಇನ್ಸುಲಿನ್ ನೀಡುವ ವಿಧಾನ, ರಕ್ತದಲ್ಲಿನ ಗ್ಲುಕೋಸನ್ನು ಸ್ವಯಂ ಪರಿಶೀಲನೆ ಮಾಡುವುದು, ಅನಾರೋಗ್ಯದ ಸಮಯದಲ್ಲಿ ಇನ್ಸುಲಿನ್ ಮತ್ತು ಆಹಾರದ ಮಾರ್ಗ ಸೂಚನೆ ಇವೆಲ್ಲರ ಬಗ್ಗೆ ಶಿಕ್ಷಣ ನೀಡಲಾಗುವುದು. ನಾವು ನಮ್ಮ ವ್ಯಾಪಕ ಸಮಯವನ್ನು ಕುಟುಂಬದೊಂದಿಗೆ ಕಳೆದು ಮಧುಮೇಹ ಮತ್ತು ಅದನ್ನು ನಿಭಾಯಿಸುವ ಕ್ರಮದ ಬಗ್ಗೆ ಶಿಕ್ಷಣ ನೀಡುತ್ತೇವೆ.

 

ನಮ್ಮ ವಿಭಾಗದ ಚಟುವಟಿಕೆಗಳು:

ನಮ್ಮ ತಂಡವು ಹಲವು ಶಾಲೆಗಳಲ್ಲಿ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕರಿಗೆ ಹಲವು ಕಾರ್ಯಕ್ರಮಗಳನ್ನು ಯೋಜಿಸಿ ಮಧುಮೇಹದ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. ನಮ್ಮ ಸಂಸ್ಥೆಯಲ್ಲಿ ಪ್ರತಿವರ್ಷವೂ ನಡೆಸುವ ವಿಶ್ವ ಮಧುಮೇಹ ದಿನ, ಡಯಟ್ರೆಟಿಕ್ಸ್ ಡೇ, ಜಾಗೃತಿ ಕಾರ್ಯಕ್ರಮ ಹಾಗೂ ಮುಂತಾದ ಆರೋಗ್ಯ ಶಿಬಿರಗಳಲ್ಲಿ ನಮ್ಮ ತಂಡವು ಸಕ್ರಿಯವಾಗಿ ಭಾಗವಹಿಸುತ್ತದೆ.

 

×
ABOUT DULT ORGANISATIONAL STRUCTURE PROJECTS