ಅಭಿಪ್ರಾಯ / ಸಲಹೆಗಳು

ನಿರ್ದೇಶಕರ ಮುನ್ನುಡಿ

ನಮಸ್ಕಾರ, ಎಲ್ಲರಿಗೂ ಉತ್ತಮ ಆರೋಗ್ಯ ವನ್ನು ಹಾರೈಸುತ್ತೇನೆ,
ಕರ್ನಾಟಕ ಮಧುಮೇಹ ಸಂಸ್ಥೆಯು (ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಡಯಾಬಟಾಲಜಿ) ೨೦೦೭ರಲ್ಲಿ ಸ್ಥಾಪಿತವಾಗಿದ್ದು, ಮಧುಮೇಹ ಮತ್ತು ನಿರ್ನಾಳ ಗ್ರಂಥಿ ರೋಗ ವಿಭಾಗಗಳಲ್ಲಿ ಸಮಗ್ರ ಸೇವೆಯನ್ನು ನೀಡಲು ಕರ್ನಾಟಕ ನಿರ್ನಾಳಗ್ರಂಥಿಶಾಸ್ತ್ರ ಮತ್ತು ಸಂಶೋಧನಾ ಸಂಸ್ಥೆ ಎಂದು ಮರುನಾಮಕರಣ ಮಾಡಲಾಯಿತು. ಕರ್ನಾಟಕ ನಿರ್ನಾಳಗ್ರಂಥಿಶಾಸ್ತ್ರ ಮತ್ತು ಸಂಶೋಧನಾ ಸಂಸ್ಥೆ ಯು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ಬೆಂಗಳೂರು ನಗರದಲ್ಲಿ ಕರ್ನಾಟಕ ಸರ್ಕಾರದ ಅನುದಾನದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ನಿರ್ದೇಶಕನಾಗಿ ನನ್ನ ಪಾತ್ರ ಆಸ್ಪತ್ರೆಯ ಆಡಳಿತ ಮಂಡಳಿಯಾಗಿ, ಆಸ್ಪತ್ರೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿರುತ್ತೇನೆ. ಈ ಸಂಸ್ಥೆಯಲ್ಲಿ ನಿರ್ನಾಳಗ್ರಂಥಿಯ ಅಸ್ವಸ್ಥತೆ ಇರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ನೀಡಲು ಉತ್ತಮ ಸೌಲಭ್ಯಗಳನ್ನು ಹೊಂದಿರುತ್ತದೆ.
ಈ ಸಂಸ್ಥೆಯು ನುರಿತ ಅರ್ಹ ವೈದ್ಯರುಗಳು ಹಾಗೂ ಸಿಬ್ಬಂದಿ ವರ್ಗವನ್ನು ಹೊಂದಿದ್ದು ಸ್ನೇಹಮಯ ವಾತಾವರಣದೊಂದಿಗೆ ಸೇವೆಯನ್ನು ನೀಡಲಾಗುತ್ತಿದೆ. ಈ ಸಂಸ್ಥೆಯಲ್ಲಿ ನಿರ್ನಾಳಗ್ರಂಥಿಯ ಅಸ್ವಸ್ಥತೆ ಹಾಗು ಮಧುಮೇಹ ಇರುವ ರೋಗಿಗಳಿಗೆ ಅತ್ಯಾಧುನಿಕ ಸೇವೆಯನ್ನು ಕೈಗೆಟುಕುವ ದರಗಳಲ್ಲಿ ಹಾಗೂ ನಿಗಧಿತ ಸಮಯದಲ್ಲಿ ಒದಗಿಸಲು, ಸಾರ್ವಜನಿಕ ಜಾಗೃತಿಗಾಗಿ ತರಬೇತಿ, ಸುಧಾರಿತ ಸಂಶೋಧನೆಗೆ ವೇದಿಕೆ ಒದಗಿಸುವುದು ಮತ್ತು ಆಧುನಿಕ ಸಂಶೋಧನಾ ಕಾರ್ಯಗಳನ್ನು ಹಮ್ಮಿಕೊಳ್ಳಲು ಸತತ ಹಾಗೂ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ. ಈ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಂಡು ನಿರ್ನಾಳಗ್ರಂಥಿಯ ಅಸ್ವಸ್ಥತೆ ಮತ್ತು ಮಧುಮೇಹದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ಮನವಿ ಮಾಡುತ್ತೇವೆ.

ನಿಮಗೆ ಉತ್ತಮ ಆರೋಗ್ಯವನ್ನು ಹಾರೈಸುತ್ತಾ,

ಡಾ.ರವಿ,
ನಿರ್ದೇಶಕರು.
ಕರ್ನಾಟಕ ನಿರ್ನಾಳಗ್ರಂಥಿಶಾಸ್ತ್ರ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು.

ಇತ್ತೀಚಿನ ನವೀಕರಣ​ : 05-05-2021 01:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ನಿರ್ನಾಳಗ್ರಂಥಿಶಾಸ್ತ್ರ ಮತ್ತು ಸಂಶೋಧನಾ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080